Udayavani public
[search 0]
More
Download the App!
show episodes
 
Loading …
show series
 
ಸೂಕ್ಷ್ಮ ಸಂವೇದಿಯಾಗಿದ್ದರೆ, ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಕಾಲ ಕೂಡಿ ಬಂದಿದ್ದೆ ಆದರೆ, ಕಡೆಯದಾಗಿ ದೈವಾನುಗ್ರಹ ಇದ್ದರೆ ಅಥವಾ ತನ್ನಲ್ಲಿ ತನಗೆ ನಂಬಿಕೆ ಇದ್ದರೆ ಹೌದು ಅಂತ ಉತ್ತರಿಸಬಹುದು. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
  continue reading
 
S3 : EP - 69 : ಶಿಖಂಡಿಯ ಕಥೆ | The story of Shikhandi ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ಭೀಷ್ಮರು ಶಿಖಂಡಿಯ ಕಥೆ ಹೇಳುತ್ತಾರೆ.... ದುರ್ಯೋಧನ ಚಿಂತಿತನಾಗಿದ್ದ . ಭೀಷ್ಮರು ಯಾವುದೇ ಕಾರಣಕ್ಕೂ ಶಿಖಂಡಿ ಜೊತೆ ಯುದ್ಧ ಮಾಡುವುದಿಲ್ಲ ಎಂದರು. ಇದಕ್ಕೆ ಅವರು ಬಲವಾದ ಕಾರಣವನ್ನೂ ನೀಡುತ್ತಾರೆ . ಹಾಗಾದ್ರೆ ಆ ಕಾರಣ ಏನು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲ…
  continue reading
 
ಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡ, ಭಯ ದುಃಖಗಳಿಂದ ಮತಿಹೀನನಂತಾದ ಇನ್ನು ಬದುಕಿ ಪ್ರಯೋಜನವೇ ಇಲ್ಲ ಸಾಯುವುದೇ ಸರಿ ಎಂದು ನಿರ್ಧರಿಸಿದವನನ್ನು ಹಿತೈಷಿಗಳು ಒಬ್ಬ ಸಂತನ ಹತ್ತಿರ ಕರ್ಕೊಂಡು ಬಂದ್ರು. ಆಗ..ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com…
  continue reading
 
S3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's message ಆತ್ಮೀಯ ಓದುಗರೇ .. ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕೌರವರು ಕಳುಹಿಸಿದ ಸಂದೇಶವನ್ನು ಉಲೂಕ ಪಾಂಡವರಿಗೆ ತಿಳಿಸಿದ ನಂತರ ಏನಾಯಿತು, ಪಾಂಡವರ ಉತ್ತರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodc…
  continue reading
 
ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
  continue reading
 
S3 : EP - 67 : ದುರ್ಯೋಧನನ ಸಂದೇಶ | Message of Duryodhana ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಯುದ್ಧಕ್ಕೆ ತಯಾರಾಗಿದ್ದ ದುರ್ಯೋಧನ, ತನ್ನ ದೂತನನ್ನು ಕರೆದು ಪಾಂಡವರಿಗೆ ಒಂದು ಸಂದೇಶ ಕಳುಹಿಸಿದ. ಈ ಸಂದೇಶ ಮುಂದೆ ಯುದ್ಧದಲ್ಲಿ ದುರ್ಯೋಧನನ ಅಂತ್ಯಕ್ಕೆ ನಾಂದಿ ಹಾಡಿದಂತಿತ್ತು . ಅದೇನದು ಸಂದೇಶ ಎಂಬ
  continue reading
 
ಇಝನಾಕಿ ಹಾಗು ಇಝನಾನಿ ಎಂಬ ದಂಪತಿಗಳ ಕಥೆ ಬರ್ತದೆ, ಜಪಾನ್ ದೇಶ ಒಂದು ದ್ವೀಪ ಸಮೂಹ, ಸಣ್ಣ ಸಣ್ಣ ದ್ವೀಪಗಳು ಸೇರಿ ದೇಶ ಆದದ್ದು. ಹಿಂದೆ ಇವೆಲ್ಲಾ ಸಮುದ್ರದಲ್ಲಿ ಮುಳುಗಿತ್ತಂತೆ ಇಝನಾಕಿ ಮತ್ತು ಇಝನಾನಿ ಎಂಬ ದೈವಾಂಶ ಸಂಭೂತ ದಂಪತಿಗಳು ಸಾಗರದಾಳದಿಂದ ಈ ದ್ವೀಪಗಳನ್ನು ಮೇಲೆತ್ತಿ ತಂದರಂತೆ.. ಆವಾಗ ಈ ದಂಪತಿಗಳಿಗೆ ನೂರಾರು ಮಕ್ಕಳಾದ್ರು ಆಗ.ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ…
  continue reading
 
ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyava…
  continue reading
 
ದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಂದೊಂದು ತುಕಡಿಗೆ ಒಬ್ಬೊಬ್ಬ ಸೇನಾ ನಾಯಕನನ್ನು ಆರಿಸಿ ಪಟ್ಟಕಟ್ಟಿದ. ನಂತರ .. ಅವರೆಲ್ಲರನ್ನು ಹಿಂದಿಟ್ಟುಕೊಂಡು ಭೀಷ್ಮರ ಬಳಿ ಹೋಗಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾ.. ಪಿತಾಮಹ, ಸೈನ್ಯ ಎಷ್ಟೇ ದೊಡ್ಡದಾಗಿರಲಿ ಸಮರ್ಥವಾಗಿರಲಿ ಅದಕ್ಕೆ ಯೋಗ್ಯನಾದ ನಾಯಕ ಇಲ್ಲದೆ ಹೋದರೆ ಅದರ ಸಾಮರ್ಥ್ಯ ವ್ಯರ್ಥವಾಗುತ್ತದೆ! ನೀವು ನೀತಿಯಲ್ಲಿ ಶುಕ್ರಾಚಾರ್ಯರಿಗೆ ಸಮ, ಧರ್ಮದಲ್ಲಿ ಪ್ರತಿಷ್…
  continue reading
 
S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharata ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಇದೀಗ ಮಹಾಭಾರತದ ಮಹಾ ಯುದ್ಧ ನಿಶ್ಚಯವಾಗಿದೆ. ಕೌರವರ ಬಳಿ ಸಂಧಾನಕ್ಕಾಗಿ ಬಂದ ಕೃಷ್ಣನ ಸಂಧಾನ ವಿಫಲವಾಯಿತು. ಬಳಿಕ ವಿಷಯ ತಿಳಿಸಲು ಪಾಂಡವರ ಬಳಿ ಬಂದ. ಆಗ ಪಾಂಡವರು ಏನೆಂದರು. ಯುದ್ದಕ್ಕೆ ಪಾಂಡವರ ತಯಾರಿ ಹೇಗಿತ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ…
  continue reading
 
ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು, ಸೈನಿಕರ ಮನಸ್ಸು ಭಯದಿಂದ ಕೂಡಿತ್ತು, ಶತ್ರು ಬಲಾಢ್ಯನಾಗಿದ್ದ, ಸಾವಿರ ಸಾವಿರ ಸೈನ್ಯದ ಬಲ ಹೊಂದಿದ್ದ. ಎದುರು ಬಂದವರ ಸೋಲಿಸುವ ಶಕ್ತಿ ಅವನಿಗಿತ್ತು. ಅಷ್ಟೇ ಅಲ್ಲದೆ ಅವನು ತನ್ನೆದುರು ಸೋತವರ ರಾಜ್ಯದ ಜನರನ್ನ ಅವರ ಕುಟುಂಬವನ್ನ ಕ್ರೂರ ರೀತಿಯಲ್ಲಿ ನಡೆಸಿಕೊಂಡ ಇತಿಹಾಸವಿತ್ತು. ಆಗ.. ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ…
  continue reading
 
ಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ .. ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. …
  continue reading
 
S3 : EP - 64 : ಕರ್ಣನ ನೆನೆದ ಕುಂತಿ Story of Karna ಯುದ್ಧದ ತಯಾರಿ ಆಗ್ತಾ ಇದೆ ಎಲ್ಲರೂ ಯುದ್ಧದ ಕುರಿತೇ ಮಾತಾಡ್ತಾರೆ, ಮುಂದೆ .. ಶ್ರೀ ಕೃಷ್ಣ ವಾಸುದೇವ ಉಪಪ್ಲಾವ್ಯಕ್ಕೆ ಹೊರಟು ಹೋದ ನಂತರ ಕುಂತಿ, ಮುಂದೆ ಬರುವಂತಹಾ ಘೋರ ವಿನಾಶವನ್ನು ನೆನೆದು ಬೇಸರಗೊಂಡಳು.. ಅವಳಿಗೆ ಭಯವಿತ್ತು.. ತನ್ನ ಮಕ್ಕಳು ಐದು ಮಂದಿ ಅವರು ನೂರು ಮಂದಿ ! ಮುಂದೇನಾಗ್ತದೋ ಎಂದು ಯೋಚಿಸಿ ಭಯಭೀತಳಾಗಿದ್ದಾಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ…
  continue reading
 
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ವಿಷಯವನ್ನ ನಾವೆಲ್ಲ ಚರಿತ್ರೆಗಳಲ್ಲಿ ಓದಿದ್ದೇವೆ. ದೇಶದ ಗಡಿ ದಾಟಿ ಹೊರಗೂ ಇದರ ಕೀರ್ತಿ ವ್ಯಾಪಿಸಿತ್ತು. ಧರ್ಮ ಲುಪ್ತವಾಗದಂತೆ, ಅಯೋಗ್ಯರ ಕೈಗೆ ಸಿಗದಂತೆ ಕಾಯುವವರಿದ್ದರು. ಅದರ ಹಿಂದಿನ ಮನೋಜ್ಞ ಕತೆ ಇಂದಿನ ಸಂಚಿಕೆಯಲ್ಲಿ. ಅಲೆಕ್ಸಾಂಡರ್ ನ ಗುರು ಅರಿಸ್ಟಾಟಲ್ ಅವರು ಪ್ಲಾಟೊರ ಶಿಷ್ಯರು, ಅವರ ಪರಮ ಗುರು ಸಾಕ್ರೆಟೀಸ್. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬರುವಾಗ ಗುರುವಿನ ಬಳಿ ಭಾರ…
  continue reading
 
ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ.... ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com…
  continue reading
 
S3 : EP - 63 :ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birth ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕರ್ಣನಿಗೆ ಕೃಷ್ಣ ಜನ್ಮ ರಹಸ್ಯವನ್ನು ತಿಳಿಸಿದ ಕಥೆ ಇದು. ಪಾಂಡವರ ಪರವಾಗಿ ಕೌರವರ ಜೊತೆ ಸಂಧಾನಕ್ಕೆ ಬಂದಿದ್ದ ಕೃಷ್ಣ ಕರ್ಣನನ್ನು ಭೇಟಿ ಮಾಡಿ ಕರ್ಣನ ಹುಟ್ಟಿನ ರಹಸ್ಯವನ್ನು ತಿಳಿಸುತ್ತಾನೆ. ಆಗ ಕರ್ಣನ ಪ್ರತಿಕ್ರಿಯೆ ಎಂಥವರಲ್ಲೂ ಆಶ್ಚರ್ಯ ಹುಟ್ಟಿಸುತ್ತದೆ ಹಾಗಾದ್ರೆ ಅಲ್ಲಿ ನಡೆದಿದ್ದೇನು …
  continue reading
 
ಭವ ತ್ಯಜಿಸಿದವನೊಬ್ಬನಿದ್ದ, ಅಂದ್ರೆ ತನ್ನೆಲ್ಲವನ್ನು ಬಿಟ್ಟು ಖಾವಿ ವಸ್ತ್ರವನ್ನೋ ಬಿಳಿ ವಸ್ತ್ರವನ್ನೋ ಧರಿಸಿ ಮನೆ ಬಿಟ್ಟು ಕಾಡು ಮೇಡು ತಿರುಗುತ್ತಿದ್ದವ ಎಂಬ ಅರ್ಥ ಅಲ್ಲ. ಅವ ಸಂಸಾರದಲ್ಲಿ ಇದ್ದ ..ಇದ್ದರೂ ಇಲ್ಲದಂತಿದ್ದ. ಕಮಲದ ಎಲೆಯ ಮೇಲಿನ ಬೆಳ್ಳಂಬೆಳಗಿನ ಅಮೃತದ ಬಿಂದುವಿನ ಹಾಗೆ ಇದ್ದ. ಅಂದ್ರೆ.. ಚೂರು ಅಲ್ಲದಿದ್ದರೂ ಕೂಡ ಅವನು ನೀರಿನಲ್ಲಿ .... ಆಗ ..ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗ…
  continue reading
 
ಸ್ವಾನ್ಗ್ ಸೆ ಎಂಬ ವಿರಕ್ತ ದಾರ್ಶನಿಕನಿದ್ದ, ಎಂತಾ ಜಟಿಲ ಸಮಸ್ಯೆಯನ್ನೂ ಹಸನ್ಮುಖದಿಂದ ಪರಿಹರಿಸುತ್ತಿದ್ದ.. ಇವನು ಕೋಪಗೊಂಡದ್ದನ್ನು ಕಂಡವರೇ ಇರಲಿಲ್ಲ ! ಈತ ಚಿಂತಿತನಾದವನೇ ಅಲ್ಲ ! ಇಂತಾ ಸಮ ಚಿತ್ತ ಹೊಂದಿದ್ದರೂ ಆತ ಒಂದು ದಿನ ಚಿಂತಿತನಂತೆ ಕಂಡ.. ಆಗ ..ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com…
  continue reading
 
ಒಬ್ಬ ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿಯ ಸ್ಥಾನ ತೆರವಾಗಿತ್ತು, ಮುಖ್ಯಮಂತ್ರಿಯಾಗಲು ಅನೇಕ ಅರ್ಹತೆಗಳು ಬೇಕು, ಅದರಲ್ಲಿ ತಾಳ್ಮೆ, ಸಮಯಪ್ರಜ್ಞೆ, ಮುತ್ಸದ್ದಿತನ, ಬುದ್ದಿವಂತಿಕೆ ಮುಖ್ಯವಾದವು. ಇದಕ್ಕಂತಲೇ ಅನೇಕ ಪರೀಕ್ಷೆಗಳನ್ನು ರೂಪಿಸಲಾಯಿತು. ಕಡೆಗೂ ಕೊನೆಯ ಸುತ್ತಿನ ಪರೀಕ್ಷೆಗೆ ಮೂರು ಮಂದಿ ಆಯ್ಕೆಯಾದರು.. ಆಗ.. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್…
  continue reading
 
ಮಹಾ ಮಠದ ಪರಮಾಚಾರ್ಯ ಪೀಠಕ್ಕೆ ಆಯ್ಕೆ ನಡೀತಾ ಇತ್ತು ಪರಮಾಚಾರ್ಯರು ಹರಯದವನೊಬ್ಬನನ್ನ ಆಯ್ಕೆ ಮಾಡಿದ್ರು, ನೆರೆದವರಿಗೆ ಒಂದು ತರಹದ ನಿರಾಸೆ ಆಯ್ತು ಬಹಳಷ್ಟು ಅನುಭವ ಇದ್ದವನ ಹಾಗೆ ಕಾಣ್ತಾ ಇಲ್ಲ, ಗುರುಗಳು ಇವನನ್ನ ಹೇಗೆ ಆಯ್ಕೆ ಮಾಡಿದ್ರು ? ವಿದ್ಯೆಯಿಂದ, ಅನುಭವದಿಂದ , ವಯಸ್ಸಿನಿಂದ ಕೂಡ ಮಾಗಿದವರು ಇದ್ದಾಗಲೂ ಕೂಡ ಈ ಹುಡುಗ ಹೇಗೆ ಆಯ್ಕೆಯಾದ ? ಆಗ ... ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿ…
  continue reading
 
S3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri Krishna ದುರ್ಯೋಧನ ಸಭಾ ಸದರ ಅದೂ ಮುಖ್ಯವಾಗಿ ಬೀಷ್ಮ, ದ್ರೋಣ, ಕರ್ಣಾದಿಗಳ ಹಾಗೂ ಶ್ರೀ ಕೃಷ್ಣನ ಮಾತುಗಳನ್ನು ದಿಕ್ಕರಿಸಿ ಸಭಾ ತ್ಯಾಗ ಮಾಡಲು ಎದ್ದು ನಿಂತಾಗ ವಿದುರನೂ ಇದ್ದು ನಿಂತ ಕೋಪ ಕ್ರೋಧಗಳನ್ನು ನಿಯಂತ್ರಿಸಲಾಗದೇ ನಡುಗುತ್ತಿದ್ದ ಧುರ್ಯೋಧನನ್ನ ನೋಡ್ತಾ.. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾ…
  continue reading
 
ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ…
  continue reading
 
ಶ್ರೀ ಕೃಷ್ಣ ತನ್ನ ಮೃದು ವಚನಗಳಿಂದಲೇ ದೃತರಾಷ್ಟ್ರ ಪುತ್ರನ ಕೃತಿಮಾಗಳೆಲ್ಲವನ್ನೂ ಸಭೆಯ ಎದುರು ತೆರೆದಿಟ್ಟರೂ ನೆರೆದವರಲ್ಲಿ ಒಬ್ಬರೂ ಅವನನ್ನು ಸಮರ್ಥಿಸಲಿಲ್ಲ, ಆದರೆ ಜಮದಗ್ನಿ ಋಷಿಗಳ ಪುತ್ರ ಪರಶುರಾಮರು ಎದ್ದು ನಿಂತರು.. ಅವರು ಹೀಗಂದ್ರು, ಮಹಾರಾಜ ನಾನೀಗ ಉದಾಹರಣೆಯೊಂದಿಗೆ ಹೇಳುವ ಸತ್ಯವಾದ ಮಾತನ್ನು ಕೇಳು.. ಅನಂತರ ಈ ಮಾತಿನ ಹಿಂದಿರುವ ಸತ್ಯ ಪಾಲನೆ ಮಾಡಬೇಕೋ ಬೇಡವೋ ಅದು ನಿನಗೆ ಬಿಟ್ಟದ್ದು ನೀನು ನಿರ್ಧರಿಸು ಅಂದ.. ಮುಂದೇನಾ…
  continue reading
 
ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು,ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತತ್ತಿ ದಾಸಿ ಬಾ ಎಂದಿದ್ದ ಕೌರವ…
  continue reading
 
ಒಂದಾನೊಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ, ಒಂದು ಸಂಜೆ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋದ.. ಅವನು ಅತ್ತ ಹೋಗುತ್ತಿದ್ದ ಹಾಗೆ ವಿಷ ತುಂಬಿದ ಹಾವೊಂದು ಒಳಗೆ ಬಂತು ಹಾವಿಗೆ ತುಂಬಾ ಹಸಿವಾಗಿತ್ತು.. ಅತ್ತಿತ್ತ ಹರಿದಾಡಿ ತಿನ್ನಲಿಕ್ಕೆ ಏನಾದ್ರೂ ಸಿಗಬಹುದೇ ಅಂತ ಹುಡುಕಾಡಿದಾಗ ಅದಕ್ಕೆ ಒಪ್ಪಿಯಾಗುವಂತದ್ದು ಏನೂ ಸಿಗಲಿಲ್ಲ.. ಆಗ ...ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ…
  continue reading
 
S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court.ಕೃಷ್ಣ.. ಸಂಧಾನಕ್ಕಾಗಿ ದುರ್ಯೋಧನನ ಅರಮನೆಗೆಬರ್ತಾನೆ, ಕುರು ಸಭೆಯಲ್ಲಿ.. ಕುಂತಿಗೆ ನಮಸ್ಕರಿಸಿ ಅನುಮತಿ ಪಡೆದು ದುರ್ಯೋಧನನ ಅರಮನೆಗೆ ಬಂದ. ಅರಮನೆಯಮೂರೂ ಮಹಾದ್ವಾರವನ್ನು ದಾಟಿ ಪ್ರಸಾದವನ್ನು ಪ್ರವೇಶಿಸಿದ.. ಅಲ್ಲಿ ದುರ್ಯೋಧನ ತನ್ನೋವರೊಡಗೂಡಿ ಆಸೀನನಾಗಿದ್ದ.. ದುರ್ಯೋಧನ ಶ್ರೀಕೃಷ್ಣ ಆಗಮಿಸುವುದನ್ನು ಕಂಡು .. ಮುಂದೇನಾಯ್ತ…
  continue reading
 
ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ, ಗುರುಗಳು ಪಾಠ ಶುರುಮಾಡುವ ಮುನ್ನ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿ ಬಾಯಿಕಟ್ಟಿ ಗುರುಗಳ ಕಣ್ಣಳತೆಯಷ್ಟು ದೂರದಲ್ಲಿಡಬೇಕು ಪಾಠ ಮುಗಿದ ಮೇಲೆ ಅದನ್ನು ಬಿಡಬೇಕು. ಬಹಳದಿನಗಳಕಾಲ ಇದು ನಡೆಯಿತು. ಒಂದು ದಿನ ಗುರುಕುಲಾಧಿಪತಿಗಳು ಅಲ್ಲಿ ಬಂದ್ರು , ಅವರ ಕಣ್ಣಿಗೆ ಈ ಪದ್ಧತಿ ಬಿತ್ತು ಆಮೇಲೇನಾಯ್ತು....ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ…
  continue reading
 
S3 : EP - 59 :ಕೃಷ್ಣ ಸಂಧಾನ | Krishna Sandhana ಹಿಂದೆ ನಿರ್ಧರಿಸಿದಂತೆ ಕೃಷ್ಣ ಹಸ್ತಿನಾಪುರಕ್ಕೆ ಬರುವ ಸನ್ನಿವೇಶ.. ಕೃಷ್ಣ ಸಂಧಾನಕ್ಕೆ ಹೊರಡುತ್ತೇನೆ ಅಂದಾಗ ದ್ರೌಪದಿಗೆ ದುಃಖ ಉಕ್ಕಿ ಉಕ್ಕಿ ಬಂತಂತೆ.. ಕಣ್ಣೀರು ಸುರಿಯುತ್ತಿದ್ದರೂ ಸಂಯಮದಿಂದ ಹೇಳ್ತಾಳೆ.. ' ಕೇಶವಾ ನಾನು ನಿನ್ನ ಪ್ರೀತಿಗೆ ಪಾತ್ರಳಾದ ಸಖಿ, ನಿನ್ನಲ್ಲಿರುವ ಸಲುಗೆಯಿಂದ ಹೇಳುತ್ತಿದ್ದೇನೆ.. ಪ್ರಸಿದ್ಧ ಪಾಂಚಾಲ ವಂಶದ ದ್ರುಪದ ಮಹಾರಾಜನ ಮಗಳಾದರೂ ಯಜ್ಞಕುಂಡ…
  continue reading
 
ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ ಮೇಲಾಟ.. ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವೆಲ್ಲ ತಲೆಬಿಸಿಯಿಂದ ಪಾರಾಗುವ ಅಂತ ಅನ್ಸಿದ್ರೂ ಕೂಡ.. ಸೌಕರ್ಯಗಳಿಗೆ, ಸುಖಕ್ಕೆ ಒಗ್ಗಿ ಹೋದ ದೇಹ ಕಷ್ಟಗಳಿಗೆ ಹೆದರ್ತಾ ಇತ್ತು. ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com…
  continue reading
 
ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ…
  continue reading
 
ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು . ವಿದುರನ ಮಾತುಗಳನ್ನು ಕೇಳಿದ ಧೃತರಾಷ್ಟ್ರ ಮತ್ತಷ್ಟು ಚಿಂತಿತನಾದ. ತನ್ನ ಮಗ ದುಷ್ಟ ಎಂದು ಗೊತ್ತಿದ್ದರೂ ಆತ ಪುತ್ರ ವ್ಯಾಮೋಹಕ್ಕೆ ಒಳಗಾಗಿದ್ದ. ಈಗ ನಿರ್ಣಾಯಕ ಘಟ್ಟ ಎದುರಾಯಿತು. ಏನದು ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.…
  continue reading
 
ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ…
  continue reading
 
ಹುಟ್ಟಿನಿಂದ ಬ್ರಾಹ್ಮಣನಾಗಿದ್ದವನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ದೂರ ದೇಶದಿಂದ ಬರುವ ವ್ಯಾಪಾರಿಗಳನ್ನು ಮೋಸದಿಂದ ದೋಚುವುದನ್ನು ಕಸುಬಾಗಿ ಮಾಡಿಕೊಂಡಿದ್ದ. ತುಂಬಾ ಕಾಲ ಇದು ನಡೆಯಿತು. ಹೀಗಿರುವಾಗ ಒಮ್ಮೆ ವಿದೇಶದಿಂದ ವ್ಯಾಪಾರಿಗಳ ತಂಡವೊಂದು ಬಂತು, ಬಹುಮೂಲ್ಯ ವಸ್ತುಗಳನ್ನು ಅವರ ದೇಶದಿಂದ ತಂದಿರೋದು ಬ್ರಾಹ್ಮಣನ ಗಮನಕ್ಕೆ ಬಂತು ಆಮೇಲೇನಾಯ್ತು ? ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ…
  continue reading
 
ಸಂಜಯ ದೃತರಾಷ್ಟ್ರನ ಆದೇಶದಂತೆ ಪಾಂಡವರು ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿರುವ ಉಪಪ್ಲಾವ್ಯ ನಗರಕ್ಕೆ ಬಂದ, ಉಭಯಕುಶಲೋಪರಿಗಳಾಯಿತು. ನಂತರ ಅವನು ಪಾಂಡವರ ಕುರಿತು ಸತ್ವಗುಣ ಪ್ರಧಾನನಾದ ಯುಧಿಷ್ಠಿರ ನೀವು ಅಪಾರ ಸೈನ್ಯ ಬಲ ಹೊಂದಿದ್ದೀರಿ, ಹೀಗಿರುವಾಗ ಯುದ್ಧವೇನಾದರೂ ಅನಿವಾರ್ಯವಾದರೆ ಎರಡೂ ಕಡೆಗಳಲ್ಲಿ ಅಗಾಧವಾದ ನಷ್ಟ ಸಂಭವಿಸುವುದು ಖಂಡಿತಾ, ಹಾಗಾಗಿ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗ…
  continue reading
 
ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಯರಿಗೆ ಹೇಳಿದ ಕಥೆಯಿದು. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ ದಂಪತಿಗೆ ಬಹಳಾ ಕಾಲ ಸಂತತಿ ಇರಲಿಲ್ಲ.. ಕಡೆಗೂ ಒಂದು ಮಗು ಆಯಿತು ಹುಣ್ಣೆಮೆ ಚಂದಿರನಹಾಗಿದ್ದ ಆ ಮುಗುವನ್ನ ನೋಡಿ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ .. ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhya…
  continue reading
 
ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕ…
  continue reading
 
ಹನ್ನೆರಡು ವರ್ಷ ವನವಾಸ ಹಾಗು ಒಂದು ವರ್ಷ ಅಜ್ಞಾತವಾಸಗಾಲ ಅವಧಿ ಮುಗಿದು ಪಾಂಡವರು ತಮ್ಮ ಛದ್ಮವೇಷಗಳಿಂದ ಹೊರಬಂದು ಮಂಗಳ ಸ್ನಾನ ಮಾಡಿ, ದಿವ್ಯ ವಸ್ತ್ರಾಭರಣಗಳನ್ನು ಧರಿಸಿ ವಿರಾಟನ ಆಸ್ಥಾನಕ್ಕೆ ಬಂದರು ಆಗ .... ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com…
  continue reading
 
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
  continue reading
 
ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು . ಪಾಂಡವರ ಅಜ್ಞಾತ ವಾಸ ಮುಗಿಯುವ ಹಂತದಲ್ಲಿತ್ತು. ಇತ್ತ ಕೌರವರು ಪಾಂಡವರನ್ನು ಹುಡುಕಲು ಯತ್ನಿಸುತ್ತಿದ್ದರು. ಹೀಗಿರುವಾಗ ವಿರಾಟ ರಾಜನ ವಿರುದ್ದ ಕೌರವರು ಯುದ್ಧ ಸಾರಿದರು. ಆಗ ಪಾಂಡವರು ಈ ಯುದ್ಧದಲ್ಲಿ ಪಾಲ್ಗೊಂಡರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipo…
  continue reading
 
ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ ಡಾ. ಸಂಧ್ಯಾ. ಎಸ್. ಪೈ …
  continue reading
 
ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳು…
  continue reading
 
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ತನ್ನ ಅಕ್ಕನಲ್ಲಿ ದ್ರೌಪದಿಯನ್ನು ಹೇಗಾದರೂ ಮಾಡಿ ತಾನು ಇದ್ದಲ್ಲಿಗೆ ಕಳಿಸಲು ಕೇಳಿಕೊಂಡ . ತಮ್ಮನ ಮೇಲಿನ ಪ್ರೀತಿಯಿಂದ ಕೀಚಕನ ಅಕ್ಕ ದ್ರೌಪದಿಯನ್ನು ಒತ್ತಾಯವಾಗಿ ಕೀಚಕನಿದ್ದಲ್ಲಿಗೆ ಕಳುಹಿಸಿದಳು. ಮುಂದೆನಾಯ್ತು , ದ್ರೌಪದಿಗೆ ಅಲ್ಲಾದ ಅವಮಾನವೇನು, ಕೀಚಕನ ವಧೆ ಹೇಗಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎ…
  continue reading
 
ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ಕೇಳಿ .. ಕೇಳಿ ಡಾ.…
  continue reading
 
S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa ಪಾಂಡವರ ಹನ್ನೆರಡು ವರ್ಷಗಳ ವನವಾಸ ಮುಗೀತಾ ಬರ್ತಿತ್ತು, ಅವರಿನ್ನು ಒಂದು ವರ್ಷ ಅಜ್ಞಾತ ವಾಸಕ್ಕೆ ಸಜ್ಜಾಗಬೇಕಿತ್ತು, ಹನ್ನೆರಡು ವರ್ಷಗಳಷ್ಟು ದೀರ್ಘವಾದ ಕಾಲ ತಮ್ಮೊಂದಿಗೆ ಬಾಂಧವರಂತಿದ್ದ ವಿದ್ವಾಂಸರಾದ ಬ್ರಾಹ್ಮಣರನ್ನೂ, ತಪಸ್ವಿಗಳನ್ನೂ ಋಷಿ ಮುನಿಗಳನ್ನೂ ಬೀಳ್ಕೊಡಬೇಕಾಗಿ ಬಂದಾಗ.. ಪಾಂಡವರು ದುಃಖದಿಂದ ಅವರಿಗೆ ನಮಿಸಿ ಆಶೀರ್ವಾದ ಪಡೆದು ಹೊರಟಾಗ.. ಏನಾ…
  continue reading
 
ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹ…
  continue reading
 
S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ.. ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ. ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ…
  continue reading
 
S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothersಪಾಂಡವರು ಕಾಮ್ಯಕ ವನದಿಂದ ದ್ವೈತ ವನಕ್ಕೆ ಮರಳಿ ಹೋದರು.. ಅಲ್ಲಿ ಮಿತಾಹಾರಿಗಳಾಗಿ ವೃತನಿಷ್ಠರಾಗಿ ಇರ್ತಾ ಇದ್ರು. ಹೀಗಿರುವಾಗ ಒಂದು ದಿನ ಒಬ್ಬ ಬ್ರಾಹ್ಮಣ ಅವರು ಇದ್ದಲ್ಲಿಗೆ ಬಂದ, ಮತ್ತೆ ಹೇಳಿದ .. ಅಯ್ಯಾ ಜಿಂಕೆಯೊಂದು ನನ್ನ ಆಶ್ರಮಕ್ಕೆ ಬಂತು ನಾನು ಅಗ್ನಿ ಮತಿಸುವ ದಂಡ ಮತ್ತು ಅರಣೆಯನ್ನು ತೂಗುಹಾಕಿದ ಮರದ ಕಾಂಡಕ್ಕೆ ಮೈ ಉಜ್…
  continue reading
 
S1EP - 426 :ಎಲ್ಲವೂ ದೇವರ ಇಚ್ಛೆ? | Is everything God's will? ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanip…
  continue reading
 
ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕೇಳಿ .ಡಾ. …
  continue reading
 
ರಾಮಾಯಣದ ಯುದ್ಧಖಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
  continue reading
 
Loading …

Quick Reference Guide